ಮೂಡುಬಿದಿರೆ: 2021-22 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಇರುವೈಲು ಗ್ರಾಮದ ಆಳ್ವಾಸ್ ಕಾಲೇಜಿನ ಕಲಾ ವಿಭಾಗ ವಿದ್ಯಾರ್ಥಿನಿ ನಂದಿನಿ ಅವರು 95% ಅಂಕದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಎಸ್.ಎಸ್.ಎಲ್.ಸಿ ಯಲ್ಲಿ 83% ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು.
ಇವರು ಇರುವೈಲಿನ ಕೊನ್ನೆಪದವು ಗ್ರಾಮದ ದಿ|ರಾಜ್ ರಾಮ್ ಶೆಣೈ ಹಾಗೂ ಲತಾ ದಂಪತಿಯ ಪುತ್ರಿಯಾಗಿದ್ದಾರೆ.
ಇವರು ಮುಂದೆ ಬಿ.ಎ ಪದವಿಯನ್ನು ಪಡೆದು ಐಎಎಸ್ ಮಾಡುವ ಕನಸನ್ನು ಹೊತ್ತುಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಇವರು ಕುಣಿತ ಭಜನೆ, ಹಾಡು, ನೃತ್ಯ ಸೇರಿದಂತೆ ಎಲ್ಲಾ ಚಟುವಟಿಕೆಯಲ್ಲಿಯೂ ಆಸಕ್ತಿಯನ್ನು ಹೊಂದಿದ್ದಾರೆ.
1 Comments
ಗುಡ್
ReplyDelete.