ಉಡುಪಿ ಜು.12: ರಾಷ್ಟ್ರೀಯ ಹೆದ್ದಾರಿಯ ಸಂತೆಕಟ್ಟೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಎಸ್ಕಾರ್ಟ್ ವಾಹನ ಅಪಘಾತದ ಘಟನೆ ಇಂದು ನಡೆದಿದೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಂಗಳೂರಿನಲ್ಲಿ ಮುಖ್ಯಮಂತ್ರಿಯವರ ಕಾರ್ಯಕ್ರಮಕ್ಕೆ ತೆರಳಿದರು. ಈ ವೇಳೆ ಬೆಂಗಾವಲು ವಾಹನದ ಮುಂದೆ ಚಲಿಸುತ್ತಿದ್ದ ಲಾರಿ ಸೂಚನೇ ನೀಡದೇ ಪಥ ಬದಲಿಸಿದ ಪರಿಣಾಮ ಎಸ್ಕಾರ್ಟ್ ವಾಹನ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ವಾಹನದಲ್ಲಿದ್ದ ಎಸೈ ಮತ್ತು ಎಸ್ಕಾರ್ಟ್ ಅಧಿಕಾರಿ ಗಣೇಶ್ ಆಳ್ವಾ ಗೆ ಚಿಕ್ಕಪುಟ್ಟ ತರಚಿದ ಗಾಯಗಳಾಗಿದ್ದರೆ ಸಚಿವರು ತಮ್ಮ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
0 Comments